Thursday, April 8, 2010

ಹೀಗೊಂದು ಆಶಯ !

ಮನಸ್ಸಿನ ಭಾವನೆಗಳನ್ನು ಹೊರಹಾಕಲು ಉಪಯೋಗಿಸುವ ಮಾರ್ಗಗಳು ಒಬ್ಬಬ್ಬರಲ್ಲಿ ಒಂದೊಂದು ವಿಧ . ಕವಿ ತನ್ನ ಕಾವ್ಯದಿಂದ ,ಸಂಗೀತಗಾರ ನಾದ ಮಾಧುರ್ಯದಿಂದ ,ಶಿಲ್ಪಿ ತನ್ನ ಶಿಲ್ಪದಿಂದ , ಹೊರ ಪ್ರಪಂಚದೊಂದಿಗೆ ಬೆಸೆದುಕೊಳ್ಳುತ್ತಾನೆ . ಆ ಮೂಲಕ ಶಾಶ್ವತತೆಯನ್ನು ಗಳಿಸಲು ಪ್ರಯತ್ನಿಸುತಾನೆ . ನಾವು ಕಲೆ , ಲೋಕ ವ್ಯವಹಾರ ,ರಾಜಕೀಯ ಹೀಗೆ ಹತ್ತು ಹಲವು ವಿಷಯಗಳಲ್ಲಿ ನಮ್ಮ ಭಾವನೆ , ಅಭಿಪ್ರಾಯವನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಯೋಚನೆ ಮಾಡಿ ಈ ಬ್ಲಾಗ್ ಪ್ರಾರಂಭಿಸುತ್ತಿದ್ದೇವೆ . ಎಲ್ಲರ ಸ್ನೇಹ , ಸಹಕಾರ , ಸಲಹೆ ನಮ್ಮೊಂದಿಗೆ ಇದೆ ಎಂದು ಭಾವಿಸಿದ್ದೇವೆ . ನಮ್ಮ ಬ್ಲಾಗ್ ನಮ್ಮೆಲ್ಲರ ಬ್ಲಾಗ್ ಆಗಲಿ ಎಂಬುದು ನಮ್ಮ ಆಶಯ .

ಶಶಾಂಕ್ -ಗಣೇಶ್

6 comments:

  1. All the best Guys. Its a good initiative. Baravanige chennagi saagali :)

    ReplyDelete
  2. thanks sridhara.. :) ninna salahegal beku namge. intha vishadayalli aasakti irorge blog bagge tilisu :)

    ReplyDelete
  3. ಉತ್ತಮ ಪ್ರಯತ್ನ. ಸಾಹಿತ್ಯ, ಸಂಗೀತಗಳ ಬಗ್ಗೆ ಅನೇಕ ಬ್ಲಾಗುಗಳು ಇದ್ದರೂ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ವರದಿ ಮಾಡುವ, ಅದರಲ್ಲೂ ಕಲೆಯ ಸೂಕ್ಷ್ಮ ಅಂಶಗಳನ್ನು ಹೆಕ್ಕಿ ತೋರುವ ಪ್ರಯತ್ನ ಕಡಿಮೆಯೇ. ತಾವು ಕಂಡು/ಕೇಳಿ ಸವಿದ ರಸಾನುಭವವನ್ನು ಇತರ ಮಿತ್ರರೊಂದಿಗೆ ಹಂಚಿಕೊಳ್ಳುವ ನಿಮ್ಮ ರೀತಿಲಯಲ್ಲಿ ಆತ್ಮೀಯತೆಯಿದೆ. "ಇವತ್ತು ನಾನೊಂದು programಗೆ ಹೋಗಿದ್ದೆ, ಎಷ್ಟು ಚೆನ್ನಾಗಿತ್ತು ಅಂತೀ... " ಎಂದು ಆರಂಭವಾಗುವ ಸನ್ಮಿತ್ರರೊಡನಿನ ಹರಟೆಯನ್ನು ನಮ್ಮಲ್ಲಿ ಬಹುಪಾಲು ಜನ miss ಮಾಡಿಕೊಳ್ಳುತ್ತೇವೆ - ಕೆಲಸದ ಒತ್ತಡದ ಕಾರಣವಿರಬಹುದು, ಅಥವ ಅಂಥ ಮಿತ್ರರ ಅಭಾವವೂ ಇರಬಹುದು. ಆ ಕೊರತೆಯನ್ನು ನಿಮ್ಮ ಬರಹಗಳು ನೀಗುತ್ತವೆ ಎಂದು ನನ್ನ ಭಾವನೆ. ಮುಂದುವರೆಸಿ.

    ಈ ಬ್ಲಾಗನ್ನು ನನ್ನ ಬ್ಲಾಗ್ ಪಟ್ಟಿಗೆ ಸೇರಿಸುವಲ್ಲಿ ತಮ್ಮ ಅಭ್ಯಂತರವಿಲ್ಲವಷ್ಟೇ?

    ReplyDelete
  4. aagali manjunath avare.. khandita serisi. haage nimma salehagalannu koduttiri. nimma protsaha hige munduvareyali:)

    ReplyDelete
  5. ತುಂಬಾ ತುಂಬಾ ಸಂತೋಷ. ಸಾಹಿತ್ಯಾಸಕ್ತಿ ಒಯಸಿಸ್ ಆಗುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಯುವ ಶಕ್ತಿ ತೊರೆಯಾಗಿ ಆರಂಭವಾಗಿ ಮಹಾ ಪ್ರವಾಹವಾಗಿ ನಮ್ಮನ್ನೆಲ್ಲಾ ಆನಂದ ಸಾಗರ ಸೇರಿಸಲಿ ಎಂಬ ಹಾರೈಕೆ ನನ್ನದು.
    ಚಂದ್ರ ಶೇಖರ

    ReplyDelete
  6. ನನ್ನನ್ನು ಇಲ್ಲಿಗೆ ತಲುಪಿಸಿದ್ದು ಎಸ್ ಎಲ್ ಭೈರಪ್ಪನವರ orkut community. ನಿಮ್ಮ ಬರವಣಿಗೆಯ ಶೈಲಿ ಹಾಗು ಅದರ ಆಶಯ ಇನ್ನು ಹತ್ತಿರಕ್ಕೆ ಎಳೆಯಿತು.. ಬರವಣಿಗೆ ಹೀಗೆ ಸಾಗಲಿ, ನಮ್ಮ ಸದಭಿರುಚಿಯ ಗೆಳೆತನವು ಸಹ.. ಧನ್ಯವಾದಗಳು.. - ಸುಹಾಸ್

    ReplyDelete