tag:blogger.com,1999:blog-4695026737148261642.post3606058361972453117..comments2011-01-22T00:16:19.318-08:00Comments on samvedane: ಸಂಗೀತ ರಸಾಸ್ವಾದನೆ-ಹೀಗೊಂದು ಚಿಂತನೆsai-shashankhttp://www.blogger.com/profile/01087224158854285258noreply@blogger.comBlogger2125tag:blogger.com,1999:blog-4695026737148261642.post-590484582840045462010-04-27T22:20:02.166-07:002010-04-27T22:20:02.166-07:00ನಮಸ್ತೆ ಮಂಜುನಾಥ್ ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು :...ನಮಸ್ತೆ ಮಂಜುನಾಥ್ ,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು :)

ಅತಿಯಾದ ಗಣಿತ ಲೆಖ್ಹಾಚಾರ ಅಥವಾ ಅತಿಯಾದ ರಾಗವಿಸ್ತಾರ ಯಾವುದೂ ಕಲೆಗೆ ಪೂರಕವಲ್ಲ ಅನ್ನೋದು ನಿಜವಷ್ಟೆ. ಅದರ ಬಗ್ಗೆ ನಾನು ಲೇಖನದಲ್ಲಿ ಪ್ರಸ್ತಾಪಿಸುವ ಪ್ರಯತ್ನ ಮಾಡಿಲ್ಲ. ರಸಿಕನ ದೃಷ್ಟಿಯಿಂದ ಒಂದಷ್ಟು ಚಿಂತನೆ ನಡೆಸುವ ಪ್ರಯತ್ನ ಅಷ್ಟೇ. ಕೇಳ್ಮೆಯಲ್ಲಿ ವಸ್ತುನಿಷ್ಟೆ! ಇದೊಂದು ಆದರ್ಶ ತತ್ವ . ಹೀಗೆ ನಿಜಕ್ಕೂ ಕೇಳಲು ಸಾಧ್ಯವೇ ಅನ್ನೋದು ನನಗೆ ಗೊತ್ತಿಲ್ಲ. ಹಾಗಂದ ಮಾತ್ರಕ್ಕೆ ಅದು ಅನಗತ್ಯ ಎಂದು ಭಾವಿಸಲಾರೆ. ಸಂಗೀತಗಾರನು ಸಂಗೀತಕ್ಕಾಗಿಯೇ ಸಂಗೀತ ಹಾಡುವುದಾದರೆ ಕೇಳುಗನು ಹಾಗೆಯೇ ಮಾಡಲಾಗದೇ? ಅದೇ ಗಮ್ಯವನ್ನು ತಲುಪಲಾಗದೇ? ಅನ್ನೋ ಜಿಜ್ನಾಸಾತ್ಮಕ ದೃಷ್ಟಿ ನನ್ನದು. ವಸ್ತು ನಿಷ್ಟ ಅನ್ನುವಾಗ ನನ್ನ ಭಾವನೆ ಹೀಗಿತ್ತು. ನಿರಂತರ ಹರಿಯುವ ನಾದ ಸ್ರೋತ ಅದನ್ನು ಆಸ್ವಾದಿಸುವ ನಾನು ಅಷ್ಟು ಬಿಟ್ಟರೆ ಮತ್ತೇನು ಇರದಂತಹ ಕಲ್ಪನೆ. ಇದು ಸಾಧ್ಯವಾ ? ಅಂದರೆ ನನಗೆ ಗೊತ್ತಿಲ್ಲ. ಆದರೆ ಸತತ ಆ ನಿಟ್ಟಿನಲ್ಲಿ ಪ್ರಯತ್ನವಂತೂ ಸಾಗಿದೆ. ಆ ಪ್ರಯತ್ನದ ಫಲಶ್ರುತಿಯೇ ಈ ಲೇಖನ :)

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. :)sai ganeshhttps://www.blogger.com/profile/08906827470318167384noreply@blogger.comtag:blogger.com,1999:blog-4695026737148261642.post-8153857394208534842010-04-27T10:40:18.767-07:002010-04-27T10:40:18.767-07:00ಸಂಗೀತಕ್ಕೆ "ವಸ್ತುನಿಷ್ಠೆ" ಅಗತ್ಯವೇ? - ಚಿಂತಿ...ಸಂಗೀತಕ್ಕೆ "ವಸ್ತುನಿಷ್ಠೆ" ಅಗತ್ಯವೇ? - ಚಿಂತಿಸಬೇಕಾದ ವಿಚಾರ. ಡಿವಿಜಿಯವರಲ್ಲೆಲ್ಲೋ ಓದಿದ ನೆನಪು. ಮೈಸೂರು ವಾಸುದೇವಾಚಾರ್ಯರದೋ ಮತ್ತಾರೋ ಖ್ಯಾತನಾಮರ ಗಾಯನ, ಚೌಡಯ್ಯನವರ ಪಿಟೀಲು. ಕಚೇರಿ ಅದ್ಭುತವಾಗಿ ಕಳೆಗಟ್ಟಿದೆ; ನೆರವಲು, ಸ್ವರಕಲ್ಪನೆಯಲ್ಲಂತೂ ಅವತ್ತಿನ ಗಾಯನ ಸ್ವರ್ಗಸಮಾನವಾಗಿದೆ. ಈಗ ಚೌಡಯ್ಯನವರ ಸರದಿ. ಆ ಪುಣ್ಯಾತ್ಮ ಪಿಟೀಲನ್ನು ಕೆಳಗಿಟ್ಟು ಕೈ ಮುಗಿದು ಹೇಳುತ್ತಾರೆ "ಸ್ವಾಮೀ, ಈಗಷ್ಟೇ ಈ ಗಾನದ ಅಮೃತವನ್ನು ಈಂಟಿದ್ದೇವೆ, ಇನ್ನು ಇದನ್ನು ಗಣಿತದಲ್ಲಿ ಅದ್ದಿ ರುಚಿಗೆಡಿಸಲಾರೆ, ಕ್ಷಮಿಸಬೇಕು"

ಸಂಗೀತದಲ್ಲಿ, ಅದರಲ್ಲೂ ಕರ್ನಾಟಕ ಸಂಗೀತದಲ್ಲಿ ಗಣಿತವಿಲ್ಲದೇ ಸಾಧ್ಯವೇ ಇಲ್ಲ, ಆದರೆ ಅದರ ವೈಭವದಲ್ಲೂ ಸಂಗೀತದ ಹದ ಕೆಡದಂತೆ ನೋಡಿಕೊಳ್ಳುವುದೀಗ ನಿಜವಾದ ಕಲೆ. ಅದೇ ಕೇಳುಗನಿಗೂ ಅನ್ವಯಿಸಬಹುದೇ?

ವಿಚಾರಪ್ರಚೋದಕ, ಎಂದಿನಂತೆ ಸದಭಿರುಚಿಯ, ಲೇಖನ. ಹೀಗೇ ಬರೆಯುತ್ತಿರಿ.Manjunatha Kollegalahttps://www.blogger.com/profile/06597757236883289208noreply@blogger.com